Please enable javascript.ಫ್ರೀ ಬಸ್‌ಗೆ ವಿದ್ಯಾರ್ಥಿಗಳ ಬೇಡಿಕೆ,Shakti Guarantee: "ನಮಗ್ಯಾಕಿಲ್ಲ ಫ್ರೀ ಬಸ್‌ ಅಂತಿದಾರೆ ವಿದ್ಯಾರ್ಥಿಗಳು" ಕಲಬುರಗಿಯಲ್ಲಿ ಉಚಿತ ಪಾಸ್‌ಗಾಗಿ ಒತ್ತಡ - male students demanding free bus to go school - Vijay Karnataka

Shakti Guarantee: "ನಮಗ್ಯಾಕಿಲ್ಲ ಫ್ರೀ ಬಸ್‌ ಅಂತಿದಾರೆ ವಿದ್ಯಾರ್ಥಿಗಳು" ಕಲಬುರಗಿಯಲ್ಲಿ ಉಚಿತ ಪಾಸ್‌ಗಾಗಿ ಒತ್ತಡ

Curated byಸೌಮ್ಯಶ್ರೀ ಮಾರ್ನಾಡ್ | Vijaya Karnataka 19 Jun 2024, 10:16 am
Subscribe

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಓದಲು ದೂರದ ಶಾಲೆಗಳಿಗೆ ತೆರಳುವವರಿಗೆ ಫ್ರೀ ಬಸ್ ಅನುಕೂಲ ಕಲ್ಪಿಸುವಂತೆ ಬೇಡಿಕೆ ಕೇಳಿಬಂದಿದೆ. ವಿದ್ಯಾರ್ಥಿನಿಯರು ಫ್ರೀ ಬಸ್‌ ನಲ್ಲಿ ಓಡಾಡುತ್ತಿದ್ದಾರೆ. ಆದ್ರೆ ಹುಡುಗರು ಮಾತ್ರ ಬಸ್‌ಪಾಸ್‌ಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಲು ಹೆಣಗಾಡುತ್ತಿದ್ದಾರೆ. ಹೀಗಾಘಿ ನಮಗೂ ಕೂಡಾ ಫ್ರೀ ಬಸ್ ಸವಲತ್ತ ನೀಡಲಿ ಎಂಬ ಕೂಗು ಕೇಳಿಬರುತ್ತಿದೆ. ವಿದ್ಯಾರ್ಥಿಗಳಿಗೆ ಸೈಬರ್ ಸೆಂಟರ್ ಗಳ ಶುಲ್ಕವೂ ದುಬಾರಿಯಾಗುತ್ತಿದೆ.

ಹೈಲೈಟ್ಸ್‌:

  • ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ ಪ್ರಯಾಣ- ನಮಗ್ಯಾಕೆ ತೊಂದರೆ ಎನ್ನುವ ಹುಡುಗರು
  • ನಮಗೂ ಕೂಡ ಬಸ್‌ ಪ್ರಯಾಣ ಉಚಿತ ಮಾಡಲಿ ಎಂಬ ಕೂಗು ವಿದ್ಯಾರ್ಥಿ ಸಮೂಹದಿಂದ ಕೇಳಿ ಬಂದಿದೆ.
  • ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆ ಸವಾಲು
Shakti scheme
ಪ್ರಾತಿನಿಧಿಕ ಚಿತ್ರ
ಕಲಬುರಗಿ: ಒಂದೆಡೆ ಶಕ್ತಿ ಯೋಜನೆಯಲ್ಲಿ ವಿದ್ಯಾರ್ಥಿನಿಯರು ಉಚಿತವಾಗಿ ಶಾಲೆ, ಕಾಲೇಜುಗಳಿಗೆ ಓಡಾಡುತ್ತಿದ್ದಾರೆ. ಇನ್ನೊಂದೆಡೆ ವಿದ್ಯಾರ್ಥಿಗಳು(ಪುರುಷ) ಮಾತ್ರ ಬಸ್‌ಪಾಸ್‌ ಅರ್ಜಿ ಆನ್‌ಲೈನ್‌ ಮೂಲಕ ಸಲ್ಲಿಸಲು ಹೆಣಗಾಡುತ್ತಿದ್ದಾರೆ. ಇಂತಹ ವೇಳೆ ನಮಗೂ ಕೂಡ ಬಸ್‌ ಪ್ರಯಾಣ ಉಚಿತ ಮಾಡಲಿ ಎಂಬ ಕೂಗು ವಿದ್ಯಾರ್ಥಿ ಸಮೂಹದಿಂದ ಕೇಳಿ ಬಂದಿದೆ.
ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಸವಲತ್ತು ನೀಡಿದೆ. ಇದರಿಂದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ಪಾಸ್‌ ಬೇಕಾಗಿಲ್ಲ. ಆದರೆ, ಹಲವು ಬಡ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಕಲಿಯಲು ಪಕ್ಕದ ಪಟ್ಟಣ, ನಗರಗಳಿಗೆ ತೆರಳುತ್ತಾರೆ. ಕನಿಷ್ಠ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪ್ರಯಾಣ ನೀಡಿದರೆ ಅನುಕೂಲವಾಗಲಿದೆ ಎಂಬುದು ಹಲವರ ಆಶಯವಾಗಿದೆ.

ಶಕ್ತಿ ಯೋಜನೆಗೆ 1 ವರ್ಷ: ಸಾರಿಗೆ ಇಲಾಖೆಗೆ ವರ್ಷದಲ್ಲಿ 5481 ಕೋಟಿ ಭರ್ಜರಿ ಆದಾಯ

ನಾನಾ ಭಾಗ್ಯಗಳಿಗೆ ನೂರಾರು ಕೋಟಿ ಖರ್ಚು ಮಾಡುತ್ತಿರುವ ರಾಜ್ಯ ಸರಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಸೇವೆ ನೀಡಿದರೆ ಉತ್ತಮ ಎಂಬ ಮಾತು ಹಲವು ಕಡೆ ಕೇಳಿ ಬರುತ್ತಿದೆ. ಇದರಿಂದ ವಿದ್ಯಾರ್ಥಿ ಸಮೂಹ ಆನ್‌ಲೈನ್‌ ಅರ್ಜಿ ಸಲ್ಲಿಕೆ ಗೋಳಿನಿಂದ ಮುಕ್ತಿ ಕಾಣಿಸಿಕೊಳ್ಳಲಿದೆ.

ಆನ್‌ಲೈನ್‌ ಅರ್ಜಿ ಗೋಳು

ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ರಿಯಾಯಿತಿ ದರದಲ್ಲಿ ಓಡಾಡಲು ಬಸ್‌ಪಾಸ್‌ ವಿತರಣೆ ಮಾಡಲಾಗುತ್ತಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಕಡ್ಡಾಯ ಮಾಡಿರುವುದು ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕುವಂತೆ ಮಾಡಿದೆ. ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬುದು ತೋಚದಂತಾಗಿದೆ. ಮನೆಯವರು ಕೃಷಿ ಕೆಲಸ ಬಿಟ್ಟು ಒಂದೆರಡು ದಿನ ಮಕ್ಕಳ ಪಾಸ್‌ ಅರ್ಜಿ ಸಲ್ಲಿಕೆಗೆ ಅವರ ಹಿಂದೆ ಅಲೆಯುವಂತಾಗಿದೆ.

ಸೈಬರ್‌ ಸೆಂಟರ್‌ ಮುಂದೆ ಸರದಿ

ಗ್ರಾಮೀಣ ಭಾಗದಿಂದ ಬರುವ ಮಕ್ಕಳು ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಸೈಬರ್‌ ಸೆಂಟರ್‌ಗಳ ಮೊರೆ ಹೋಗಬೇಕಾದ ಅವಶ್ಯಕತೆ ಇದೆ. ಇದೊಂದು ರೀತಿಯಲ್ಲಿಆನ್‌ಲೈನ್‌ ಸೈಬರ್‌ ತಾಣ ಸೆಂಟರ್‌ಗಳಿಗೆ ವರವಾದರೆ, ವಿದ್ಯಾರ್ಥಿಗಳು ದಿನವಿಡೀ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅರ್ಜಿ ಸಲ್ಲಿಕೆ ಕಾರಣಕ್ಕೆ ಶಾಲಾರಾಂಭದ ದಿನಗಳಲ್ಲಿಯೇ ವಿದ್ಯಾರ್ಥಿಗಳು ತರಗತಿ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹಿಂದಿನ ರೀತಿ ಪಾಸ್‌ ವಿತರಣೆ ಮಾಡಲಿ

ಕಳೆದ ಹತ್ತು ವರ್ಷಗಳ ಹಿಂದೆ ಝೆರಾಕ್ಸ್‌ ಅಂಗಡಿಗಳಲ್ಲಿ ಬಸ್‌ಪಾಸ್‌ ಅರ್ಜಿ ಪಡೆದು ಅದನ್ನು ವಿದ್ಯಾರ್ಥಿಗಳೇ ಭರ್ತಿ ಮಾಡಿ ದಾಖಲೆಗಳೊಂದಿಗೆ ಬಸ್‌ನಿಲ್ದಾಣದಲ್ಲಿ ನೀಡಿದರೆ ಎರಡು ದಿನದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಲ್ಲಿ ಪಾಸ್‌ ವಿತರಣೆ ಮಾಡುತ್ತಿದ್ದರು. ಅದರಲ್ಲಿ ನಕಲಿ ವಿದ್ಯಾರ್ಥಿಗಳು ಪಾಸ್‌ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತು. ಇದರಿಂದ ಶಾಲೆಯಲ್ಲಿ ಶಿಕ್ಷರೊಬ್ಬರನ್ನು ಪಾಸ್‌ ಪ್ರಕ್ರಿಯೆಗೆ ನೇಮಕ ಮಾಡಿ ಅವರ ಮುಖಾಂತರ ವಿದ್ಯಾರ್ಥಿಗಳ ಅರ್ಜಿಯನ್ನು ಕೆಕೆಆರ್‌ಟಿಸಿ ಅಧಿಕಾರಿಗಳು ಪಡೆದು ಪಾಸ್‌ ವಿತರಣೆ ಮಾಡುತ್ತಿದ್ದರು. ಆದರೆ, ಇದೀಗ ಪಾಸ್‌ಗಾಗಿ ಸೈಬರ್‌ ಸೆಂಟರ್‌ ಮೊರೆ ಹೋಗುವುದು ಬಂದಿದೆ. ಹಿಂದಿನಂತೆಯೇ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿಧಾನ ಕೆಕೆಆರ್‌ಟಿಸಿ ಅನುಸರಿಸಬೇಕು ಎಂಬುದು ವಿದ್ಯಾರ್ಥಿಗಳ ಆಶಯವಾಗಿದೆ.

ಅರ್ಜಿ ಸಲ್ಲಿಕೆಯೇ ದುಬಾರಿ !

ಆನ್‌ಲೈನ್‌ ಅರ್ಜಿ ಸಲ್ಲಿಕೆಯೂ ಸೈಬರ್‌ ಸೆಂಟರ್‌ಗಳಲ್ಲಿ ಮಾತ್ರ ಲಭ್ಯವಿದೆ. ಇದರು ಸೈಬರ್‌ ಸೆಂಟರ್‌ಗಳಿಗೆ ವರವಾಗಿ ಪರಿಣಮಿಸಿದೆ. ಒಂದೊಂದು ಕಡೆ ಒಂದೊಂದು ದರ ನಿಗದಿ ಮಾಡಲಾಗುತ್ತಿದೆ. ಕೆಲವು ಕಡೆ 100 ರೂ.ಯಿಂದ 150ರೂ. ವರೆಗೆ ಅರ್ಜಿ ಸಲ್ಲಿಕೆಗೆ ಹಣ ಪಡೆಯಲಾಗುತ್ತಿದೆ. ಒಂದು ದಿನದ ಜತೆ ವಿದ್ಯಾರ್ಥಿಗಳು ರಿಯಾಯಿತಿ ಪಾಸ್‌ಗೆ ಹೆಚ್ಚಿನ ಹಣ ತೆರಬೇಕಾಗಿದೆ. ಇಷ್ಟೆಲ್ಲದರ ಮಧ್ಯೆ ನೆಟ್ವರ್ಕ್ ಸಮಸ್ಯೆ ಗ್ರಾಮೀಣ ಭಾಗದಲ್ಲಿ ತನ್ನ ಪ್ರಭಾವ ಬೀರುತ್ತಿದೆ. ರಿಯಾಯಿತಿ ಪಾಸ್‌ನ ಅರ್ಜಿ ಸಲ್ಲಿಕೆಗೆ ವಿದ್ಯಾರ್ಥಿ ಸಮೂಹ ದುಬಾರಿ ದರ ತೆರಬೇಕಾಗಿದೆ.

ವಿದ್ಯಾರ್ಥಿ ಬಸ್‌ಪಾಸ್‌ ಅರ್ಜಿ ಸಲ್ಲಿಸಲು ಸೈಬರ್‌ ಸೆಂಟರ್‌ಗೆ ಆಗಮಿಸಿದ್ದೇನೆ. 100 ರೂ. ಅರ್ಜಿ ಸಲ್ಲಿಕೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದರ ಜತೆಗೆ ಬಸ್‌ ಪಾಸ್‌ಹಣ ಕೂಡ ಹೊರೆಯಾಗುತ್ತದೆ. ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣವಿದೆ. ಅದರಂತೆ ಸರಕಾರ ವಿದ್ಯಾರ್ಥಿಗಳಿಗೆ ಪ್ರಯಾಣ ಉಚಿತ ಮಾಡಬೇಕು ಎಂದು ಸಿದ್ದರಾಮೇಶ ಎಸ್‌.ಕೆ., ವಿದ್ಯಾರ್ಥಿ ಹೇಳಿದ್ದಾರೆ.
ಸೌಮ್ಯಶ್ರೀ ಮಾರ್ನಾಡ್
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ