ನಿಮ್ಮ ಮಕ್ಕಳ ಯಶಸ್ಸಿಗೆ ಎಳವೆಯಲ್ಲಿಯೇ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸಿ

Aug 29, 2024

By: Sunil

ಮಕ್ಕಳ ಯಶಸ್ಸು

ತಮ್ಮ ಮಕ್ಕಳು ಬದುಕಿನಲ್ಲಿ ಯಶಸ್ಸು ಗಳಿಸಬೇಕು ಎಂಬ ಕನಸು ಎಲ್ಲಾ ಹೆತ್ತವರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಹೆತ್ತವರು ಸಾಕಷ್ಟು ಕಷ್ಟಪಡುತ್ತಾರೆ. ಆದರೆ ಮಕ್ಕಳಲ್ಲಿ ಎಳವೆಯಲ್ಲಿಯೇ ಒಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸುವ ಮೂಲಕ ಅವರ ಯಶಸ್ಸಿನ ಹಾದಿಯನ್ನು ಸುಗಮಗೊಳಿಸಬಹುದು. ಅದಕ್ಕೆ ಬೇಕಾದ ಕೆಲ ಟಿಪ್ಸ್ ಇಲ್ಲಿವೆ

Image Source: istock

ಬೆಳಗ್ಗೆ ಬೇಗ ಏಳುವ ಅಭ್ಯಾಸ

ನಿಮ್ಮ ಮಕ್ಕಳಲ್ಲಿ ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸಿ. ಇದು ತಕ್ಷಣಕ್ಕೆ ಆಗದೇ ಇರಬಹುದು. ಆದರೆ ನಿರಂತರ ಪ್ರಯತ್ನದಿಂದ ಖಂಡಿತಾ ಅವರ ದೇಹ ಸರಿಯಾದ ನಿದ್ದೆಯ ಚಕ್ರಕ್ಕೆ ಹೊಂದಿಕೊಳ್ಳುತ್ತದೆ. ಬೆಳಗ್ಗೆ ಬೇಗ ಎದ್ದು ರಾತ್ರಿ ಬೇಗ ಮಲಗುವ ಅಭ್ಯಾಸ ಬಹಳ ಉತ್ತಮ

Image Source: istock

ಮಲಗುವ ಮುನ್ನ ಬರವಣಿಗೆ

ಮಲಗುವ ಮುನ್ನ ಆ ದಿನದ ಉತ್ತಮಾಂಶಗಳು, ಘಟನೆಗಳನ್ನು ಬರೆದಿಡಲು ಮಕ್ಕಳಿಗೆ ಪ್ರೋತ್ಸಾಹಿಸಿ. ಈ ಬರವಣಿಗೆ ಮಕ್ಕಳಿಗೆ ಶಾಂತವಾಗಲು, ಬದುಕಿನ ಬಗ್ಗೆ ಖುಷಿ ಪಡಲು, ಮಲಗಲು ಮನಸ್ಸನ್ನು ಸಿದ್ಧಪಡಿಸಲು ನೆರವಾಗುತ್ತದೆ. ಈ ಅಭ್ಯಾಸ ನಿರಂತರವಾಗಿರಲಿ

Image Source: istock

ಒಂದು ಗಂಟೆ ವ್ಯಾಯಾಮ

ಮಕ್ಕಳಿಗೆ ವ್ಯಾಯಾಮದ ಮಹತ್ವವನ್ನು ಅರ್ಥ ಮಾಡಿಸಿ. ಹೀಗಾಗಿ ದಿನಕ್ಕೆ ಒಂದು ಗಂಟೆ ವ್ಯಾಯಾಮ ಮಾಡಲು ಪ್ರೋತ್ಸಾಹಿಸಿ, ಅವರಿಗೆ ನೀವು ಮಾರ್ಗದರ್ಶನ ನೀಡಿ. ಮಕ್ಕಳೊಂದಿಗೆ ನೀವು ವ್ಯಾಯಾಮ ಮಾಡಿ. ಇದು ಆರೋಗ್ಯ, ಮಾನಸಿಕ ನೆಮ್ಮದಿಗೆ ಸಹಾಯಕ ಎಂಬುದನ್ನು ಅರ್ಥ ಮಾಡಿಸಿ

Image Source: istock

10 ನಿಮಿಷ ಮೌನ

ದಿನದ ಒಂದು ಹತ್ತು ನಿಮಿಷ ಏನೂ ಕೆಲಸ ಮಾಡದೆ ಬರೀ ಶಾಂತವಾಗಿ ಇರುವುದನ್ನು ಅಭ್ಯಾಸಿಸಿ. ಈ ಮೌನ ನರವ್ಯೂಹವನ್ನು ಶಾಂತಗೊಳಿಸಲು ನೆರವಾಗುತ್ತದೆ. ಹೃದಯ ಬಡಿತ ಹಾಗೂ ಉಸಿರಾಟದ ವ್ಯವಸ್ಥೆ ಕೂಡಾ ಸ್ಥಿರವಾಗಿಸುತ್ತದೆ. ಇದು ಮಕ್ಕಳ ಆಂಗ್ಸೈಟಿ, ಒತ್ತಡವನ್ನು ತಗ್ಗಿಸುವುದಕ್ಕೂ ಸಹಾಯಕ

Image Source: istock

ಪರಿಸರದೊಂದಿಗೆ ನಂಟು

ದಿನಕ್ಕೆ ಕನಿಷ್ಠ ಅರ್ಧ ಗಂಟೆ ಪರಿಸರದೊಂದಿಗೆ ಕಳೆಯಲು ಮಕ್ಕಳಿಗೆ ಪ್ರೋತ್ಸಾಹಿಸಿ. ಅಧ್ಯಯನಗಳ ಪ್ರಕಾರ ಪರಿಸರದಲ್ಲಿ ಕಳೆಯುವುದು ಸಂತೋಷವನ್ನು ಹೆಚ್ಚಿಸಲು ನೆರವಾಗುತ್ತದ. ಹೀಗಾಗಿ ಮಕ್ಕಳಿಗೆ ಪ್ರಕೃತಿಯ ಒಡನಾಟದ ಬಗ್ಗೆ ತಿಳಿ ಹೇಳಿ

Image Source: istock

10 ಪುಟಗಳ ಓದು

ನಿಮ್ಮ ಮಕ್ಕಳಿಗೆ ಓದಲು ಪ್ರೋತ್ಸಾಹಿಸಿ. ಮಲಗುವ ಮುನ್ನ ನಿತ್ಯ ಶಿಕ್ಷಣದ ಹೊರತಾದ ಪುಸ್ತಕದ 10 ಪುಟಗಳನ್ನು ಓದುವುದು ಉತ್ತಮ. ಇದು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಸಹಾಯಕ. ಜ್ಞಾನವನ್ನು ವಿಸ್ತರಿಸುವ ಜೊತೆಗೆ ಪುಸ್ತಕದ ಒಡನಾಟ ಮೂಡಿಸುವುದಕ್ಕೂ ಇದು ನೆರವಾಗುತ್ತದೆ

Image Source: pexels

ನೀರು ಕುಡಿಯಲು ಪ್ರೋತ್ಸಾಹಿಸಿ

ಪ್ರತಿ ಒಂದು ಗಂಟೆಗೊಮ್ಮೆ ಒಂದು ಗ್ಲಾಸ್ ನೀರು ಕುಡಿಯಲು ಮಕ್ಕಳಿಗೆ ಹೇಳಿ. ಇದು ದೇಹದ ಜಲಸಂಚಯನ ಉತ್ತಮವಾಗಿಸುವ ಜೊತೆಗೆ ಹೆಚ್ಚುವರಿ ಅನಾರೋಗ್ಯಕರ ಆಹಾರ ಸೇವನೆಯನ್ನೂ ತಪ್ಪಿಸುತ್ತದೆ. ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದಕ್ಕೂ ಇದು ಸಹಾಯಕ

Image Source: istock

ಹೊಸ ಕೌಶಲ್ಯ

ಹೊಸ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಮುಖ್ಯ. ಹೀಗಾಗಿ ನಿಮ್ಮ ಮಗುವಿಗೆ ಅವರ ಆಸಕ್ತಿಯ ಕೌಶಲ್ಯ ಅಥವಾ ವಿಷಯವನ್ನು ಆಯ್ಕೆ ಮಾಡಲು ಹೇಳಿ. ಇದರ ಅಭ್ಯಾಸಕ್ಕಾಗಿ ದಿನಕ್ಕೆ ಕನಿಷ್ಠ 30 ನಿಮಿಷ ಮೀಸಲಿಡಿ. ಕೆಲ ತಿಂಗಳ ಬಳಿಕ ಈ ಕಲಿಕೆಯಲ್ಲಿ ನೀವೆಷ್ಟು ಪ್ರಗತಿ ಕಂಡಿದ್ದೀರಿ ಎಂಬುದನ್ನು ಪರಿಶೀಲಿಸಿ

Image Source: istock

Thanks For Reading!

Next: ಪುರುಷರು ತಿಳಿದಿರಲೇಬೇಕಾದ ಮಹಿಳೆಯರ ರಹಸ್ಯಗಳು

Find out More